ಅ.08: ಶರಣ ಸಂಸ್ಕøತಿ ಮತ್ತು ವಚನ ಚಳುವಳಿಗಳು ನಮ್ಮ ದೊಡ್ಡ ಪರಂಪರೆಗಳಾಗಿವೆ. ಅವರು ಕಟ್ಟಿಕೊಟ್ಟ ಸಮ ಸಮಾಜವನ್ನು ಸಂವಿಧಾನದ ಆಶಯಗಳಡಿ ಮುಂದುವರಿಸಲಾಗುತ್ತಿದೆ. ಇದಕ್ಕೆ ಛಲ ಮತ್ತು ಬದ್ಧತೆಗಳಿದ್ದರೆ ಸಾಧ್ಯ ಎಂದು ಚಿಂತಕ-ರಂಗಕರ್ಮಿ ಯೋಗೇಶ್ ಮಾಸ್ಟರ್ಅವರು ಮೆಚ್ಚುಗೆ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ ಮುಖಾ-ಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆ ನಿಟ್ಟಿನಲ್ಲಿ ತಾತ್ವಿಕ ಬದ್ಧತೆಯನ್ನು ರೂಢಿಸಿಕೊಳ್ಳಬೇಕು. ಯಾವುದೇ ಸಮಾಜ ಬದಲಾವಣೆ ಆಗಬೇಕಾದರೆ ಕ್ರಿಯೆ, ಪ್ರತಿಕ್ರಿಯೆಗಳು ನಡೆಯಬೇಕು. ಇಂಥ ಸಮಾಜಮುಖಿ ಆಲೋಚನೆಗಳಿಂದ ಕೂಡಿದ ಇಂಥ ಕಾರ್ಯಕ್ರಮಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಮಾಜ ಪರಿವರ್ತನೆ ಕಾರ್ಯ ಮಾಡುತ್ತಿದೆ ಎಂದರು.
ಬಸವಾದಿ ಶರಣರ ಸಂಸ್ಕøತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಲು ನಾವೆಲ್ಲ ಪ್ರತಿನಿಧಿಗಳಾಗಬೇಕು. ಅರಿವೇ ಗುರು ಎಂಬ ತಾತ್ವಿಕ ನೆಲೆಗಟ್ಟಿನಲ್ಲಿ ನಾವು ಗುರಿಯನ್ನು ತಲುಪಲು ಪರಂಪರೆಯ ಭಾಗವಾಗಿ ನಡೆಯಬೇಕು ಎಂದು ಅವರು ಹೇಳಿದರು.
ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಶರಣರು ಕಂಡ ಸಮ ಸಮಾಜದ ನಿರ್ಮಾಣಕ್ಕೆ ನಾವೆಲ್ಲ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಾಡಿನ ಕಲೆ, ಸಾಹಿತ್ಯ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಪರಿಷತ್ತು ನಿರಂತರ ಕಾರ್ಯನಿರತವಾಗಿದೆ. ಆ ಮೂಲಕ ಜನ ಸಾಮಾನ್ಯರ ಪರಿಷತ್ತನ್ನಾಗಿಸಲು ಚಟುವಟಿಕೆಗಳು ರೂಪಿಸಲಾಗಿದೆ ಎಂದರು. ನಂತರ ಚಿಂತಕ ಯೋಗೇಶ ಮಾಸ್ಟರ್ ಅವರೊಂದಿಗೆ ಭಾಗವಹಿಸಿದ್ದ ಪ್ರೇಕ್ಷಕರು ಮುಕ್ತ ಸಂವಾದ ನಡೆಸಿದರು.
ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ್ ಕೊಪ್ಪದ್, ಸಾಹಿತಿ ಧರ್ಮಣ್ಣ ಹೆಚ್. ಧನ್ನಿ, ಶರಣರಾಜ್ ಛಪ್ಪರಬಂದಿ, ಶಕುಂತಲಾ ಪಾಟೀಲ್, ಸುರೇಶ್ ದೇಶಪಾಂಡೆ, ಬಾಬುರಾವ್ ಪಾಟೀಲ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪ್ರಮುಖರಾದ ವಿನೋದಕುಮಾರ್ ಜೇನವೇರಿ, ರಾಜೇಂದ್ರ ಮಾಡಬೂಳ್, ದೌಲತರಾವ್ ದೇಸಾಯಿ, ಹೆಚ್.ಎಸ್. ಬರಗಾಲಿ, ಪ್ರಭವ್ ಪಟ್ಟಣಕರ್, ಡಾ. ರೆಹಮಾನ್ ಪಟೇಲ್, ಪಿಡ್ಡೆಪ್ಪ ಜಲೇಗಾರ್, ವಿಶ್ವನಾಥ್ ತೊಟ್ನಳ್ಳಿ, ಶ್ರೀಕಾಂತ್ ಪಾಟೀಲ್ ದಿಕ್ಸಂಗಿ, ಶ್ರೀದೇವಿ ಕೋರೆ, ಮಲ್ಲಿನಾಥ್ ಸಂಗಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.